ಜಿಲ್ಲಾ ಸುದ್ದಿ

ಹುಬ್ಬಳ್ಳಿ ಕ್ರಿಕೆಟ್ ಬೆಟ್ಟಿಂಗ್ : ಸಿಐಡಿ ತನಿಖೆ ಚುರುಕು

ಹುಬ್ಬಳ್ಳಿ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸಿಐಡಿ ಅಧಿಕಾರಿಗಳು ಬುಧವಾರವೂ ನಗರಾದ್ಯಂತ ಸಂಚರಿಸಿ ಮಾಹಿತಿ ಕಲೆ ಹಾಕುವ...

ಹುಬ್ಬಳ್ಳಿ ಕ್ರಿಕೆಟ್ ಬೆಟ್ಟಿಂಗ್ : ಸಿಐಡಿ ತನಿಖೆ ಚುರುಕು
ಸಾಂದರ್ಭಿಕ ಚಿತ್ರ
Published On :

ಹುಬ್ಬಳ್ಳಿ: ಹುಬ್ಬಳ್ಳಿ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸಿಐಡಿ ಅಧಿಕಾರಿಗಳು ಬುಧವಾರವೂ ನಗರಾದ್ಯಂತ ಸಂಚರಿಸಿ ಮಾಹಿತಿ ಕಲೆ ಹಾಕುವ ಜತೆಗೆ ಬೆಟ್ಟಿಂಗ್ ಫಲಾನುಭವಿಗಳು ಎನ್ನಲಾದ ಕೆಲ ಪತ್ರಕರ್ತರ ವಿಚಾರಣೆ ಶುರುಮಾಡಿದ್ದಾರೆ. ಟ್ರಿನಿಟಿ ಟೆಕ್ನಾಲಜಿಸ್ ಆ್ಯಂಡ್ ಸಾರ್ಟ್  ವೇರ್ಸ್ ಸಂಸ್ಥೆಯ ಮೇಲೆ ಸಿಐಡಿ ಅಧಿಕಾರಿ ಗಳ ತಂಡ ದಾಳಿ ನಡೆಸಿ ಕೆಲ ಮಹತ್ವದ ಮಾಹಿತಿ ಹಾಗೂ ದಾಖಲೆ ಸಂಗ್ರಹಿಸಿದೆ. ಟ್ರಿನಿಟಿ ಸಂಸ್ಥೆಯ ಮುಖ್ಯಸ್ಥ ರಜನೀಶ್ ಮೇಲೆ ಬೆಟ್ಟಿಂಗ್ ಪ್ರಕರಣದ ಪ್ರಮುಖ ಸಾಕ್ಷ್ಯ ನಾಶ ಪಡಿಸಲು ಪೊಲೀಸ್ ಅಧಿಕಾರಿಯೊಬ್ಬರಿಗೆ ಸಹಕರಿಸಿದ್ದಾರೆ ಎಂಬ ಆರೋಪವಿದೆ.

ಬುಧವಾರ ಬೆಳಗ್ಗೆ ಸಿಐಡಿ ಉಪ ಅಧೀಕ್ಷಕ ರತ್ನಾಕರ ನೇತೃತ್ವದ ತಂಡ ದಾಳಿ ನಡೆಸಿ ರಜನೀಶ್‍ರನ್ನು ವಿಚಾರಿಸಿ, ಸಂಸ್ಥೆಯಲ್ಲಿದ್ದ ಕಂಪ್ಯೂಟರ್ ಹಾರ್ಡ್ ಡಿಸ್ಕ್ಮ ಗಳನ್ನು ವಶಕ್ಕೆ ತೆಗೆದುಕೊಂಡಿದೆ. ಪೇದೆಗಳಾದ ನರೇಂದ್ರ, ಮೃತ್ಯುಂಜಯ ಕಾಲವಾಡ ಜೂ. 3ರಂದು ಸುವರ್ಣ ನ್ಯೂಸ್ ತಂಡ ರಹಸ್ಯ ಕಾರ್ಯಾತಚರಣೆ ನಡೆಸುವ ವೇಳೆ ಹಲ್ಲೆ ಮಾಡಿದ್ದರು. ಈ ವೇಳೆ ಸುವರ್ಣ ತಂಡದವರ ಬಳಿಯಿದ್ದ ಕ್ಯಾಮರಾ, ಮೊಬೈಲ್ ಹಾಗೂ ಕಾರ್ಯಾಚರಣೆಗೆ ಬಳಸುತ್ತಿದ್ದ ಉಪಕರಣ ದೋಚಿದ್ದರು. ಸುವರ್ಣ ನ್ಯೂಸ್ ತಂಡದವರ
ಉಪಕರಣಗಳಲ್ಲಿದ್ದ ವಿಡಿಯೋ ಹಾಗೂ ಆಡಿಯೋ ಕ್ಲಿಪ್‍ಗಳನ್ನು ನಾಶ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗೆ ರಜನೀಶ್ ಸಹಕರಿಸಿದ್ದರು ಎನ್ನಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಸಿಸಿಟಿವಿ ಅವಳವಡಿಕೆ ಹಾಗೂ ಉಪಕರಣಗಳ ಪೂರೈಕ  ಗುತ್ತಿಗೆಯನ್ನೂ ರಜನೀಶ್‍ಗೂ ನೀಡಲಾಗಿತ್ತು.

 ಪತ್ರಕರ್ತರ ವಿಚಾರಣೆ:
ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಈ ಬೆಟ್ಟಿಂಗ್ ದಂಧೆಯನ್ನು ಕುಟುಕು ಕಾರ್ಯಾಚರಣೆ ಮೂಲಕ ಸುವರ್ಣ ವಾಹಿನಿ ಬಯಲು ಮಾಡಿದಾಗ ಈ ದಂಧೆಯ ಫಲಾನುಭವಿಯಾಗಿದ್ದ 9 ಪೊಲೀಸ್ ಅಧಿಕಾರಿಗಳು ಮತ್ತು 15 ಜನ ಪತ್ರಕರ್ತರ ಪಟ್ಟಿಯೊಂದು ಬೆಳಕಿಗೆ ಬಂದಿತ್ತು. ಪೊಲೀಸ್ ಅಧಿಕಾರಿಗಳು ಸುವರ್ಣ ವಾಹಿನಿಯ ಕುಟುಕು ದಾಖಲೆಗಳನ್ನೆಲ್ಲ ನಾಶ ಮಾಡಿದ್ದರು.

ಪೊಲೀಸರು ನಾಶ ಮಾಡಿದರು ಎನ್ನಲಾಗಿದ್ದ ಸುವರ್ಣ ವಾಹಿನಿಯ ಕುಟುಕು ದಾಖಲೆಗಳು ಇನ್ನೊಂದು ವಾಹಿನಿಯ ವರದಿಗಾರನಿಗೆ ಲಭಿಸಿವೆ ಎನ್ನುವ ಮಾಹಿತಿ ಆಧರಿಸಿ ಸಿಐಡಿ ಅಧಿಕಾರಿಗಳು ಈಗ ಒಬ್ಬರನ್ನು ವಿಚಾರಿಸಿದ್ದು,ಇನ್ನೆರೆಡು ದಿನದಲ್ಲಿ ಉಳಿದ ಪತ್ರಕರ್ತರ ವಿಚಾರಣೆಯೂ ನಡೆಯಲಿದೆ ಎಂದು ಬಲ್ಲ ಮೂಲಗಳು ಹೇಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.